ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ಅಧ್ಯಕ್ಷರಿಂದ ಧ್ವಜಾರೋಹಣ
ದೇಶದ ಎಲ್ಲ ಭಾಗಗಳಲ್ಲೂ ಇಂದು ಸ್ವಾತಂತ್ರ್ಯದ ಸಂಭ್ರಮ ಮುಗಿಲುಮುಟ್ಟಿದೆ. ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ ದೇಶದ ಜನತೆ ತಮ್ಮ ಸ್ವಾತಂತ್ರ್ಯ ಪ್ರೇಮ, ದೇಶಭಕ್ತಿಯನ್ನು ಮೆರೆಯುತ್ತಿದ್ದಾರೆ. ಈ ಶುಭ ಸಂಭ್ರಮದಲ್ಲಿ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಚೇರಿಯಲ್ಲೂ 79ನೇ ಸ್ವಾತಂತ್ರ್ಯೂತ್ಸವವನ್ನು ಸರಳ, ಸುಂದರವಾಗಿ ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾದ ಶ್ರೀ ಎಸ್. ರಘುನಾಥ್ ಅವರು ಧ್ವಜಾರೋಹಣ ನೆರವೇರಿಸಿದರು.